ನೀವು ಇತ್ತೀಚೆಗೆ ಭೇಟಿ ನೀಡಿದ ಒಂದು ಪ್ರವಾಸಿ ಸ್ಥಳದ ಬಗ್ಗೆ ವಿವರಿಸುತ್ತಾ ನಿಮ್ಮ ಅಜ್ಜನಿಗೊಂದು ಪತ್ರ ಬರೆಯಿರಿ
ಕ್ಷೇಮ ಶ್ರೀ ಇಂದ,
ಪ್ರಥಮ್
ಮನೆ ನಂ.೨೫
ವಿಜಯನಗರ ನಗರ.
ಬೆಂಗಳೂರು - 560040.
ತೀರ್ಥರೂಪ ಸಮಾನರಾದ ಅಜ್ಜನಿಗೆ,
ನಿಮ್ಮ ಮೊಮ್ಮಗಳು ಮಾಡುವ ಶಿರಸಾಷ್ಟಾಂಗ ನಮಸ್ಕಾರಗಳು ನಾನು ಇಲ್ಲಿ ಕ್ಷೇಮವಾಗಿದ್ದೇನೆ ನಿಮ್ಮ ಕ್ಷೇಮ ಸಮಾಚಾರಕ್ಕೆ ಪತ್ರವನ್ನು ಬರೆಯಿರಿ. ನನ್ನ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತಿದೆ.
ಈಗ ಪತ್ರ ಬರೆಯಲು ಕಾರಣವೇನೆಂದರೆ ಕಳೆದ ವಾರ ನಾನು ನನ್ನ ಗೆಳತಿಯರ ಜೊತೆ ಶಿವಗಂಗೆ ಬೆಟ್ಟಕ್ಕೆ ಚಾಣಕ್ಕೆ ಹೋಗಿದ್ದೆವು. ಬೆಳಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಎಲ್ಲರೂ ಸಿದ್ದರಾಗಿ ಕಾರಿನಲ್ಲಿ ಹೊರಟೆವು. ನಮ್ಮನ್ನು ಹೊತ್ತೊಯ್ಯುತ್ತಿದ್ದ ಫಾರ್ಚುನರ್ ಕಾರು ನಗರವನ್ನು ಹಿಂದಕ್ಕೆ ಬಿಟ್ಟು ವೇಗವಾಗಿ ಸಾಗುತ್ತಿದ್ದಂತೆ ನಾವೆಲ್ಲ ಅಂತ್ಯಾಕ್ಷರಿಯನ್ನು ಹಾಡುತ್ತಾ, ನಡೆಯುತ್ತಿದ್ದೆವು. ಶಿವಗಂಗೆ ಬೆಟ್ಟವನ್ನು ಏರಿ ಗಂಗಾಧರೇಶ್ವರನ ದರ್ಶನವನ್ನು ಪಡೆದೆವು. ಅಲ್ಲಿಂದ ಮತ್ತೆ ಚಾರಣ ಆರಂಭವಾಯಿತು ಬೆಟ್ಟದ ತುತ್ತ ತುದಿಯನ್ನು ತಲುಪುವ ವೇಳೆಗೆ ಮಧ್ಯಾಹ್ನ ಎರಡು ಗಂಟೆ ಆಗಿತ್ತು ಅಲ್ಲಿಂದ ಇಡೀ ನಗರ ಒಂದು ಪುಟ್ಟ ಮಾದರಿಯಂತೆ ಕಾಣುತ್ತಿತ್ತು. ಸ್ವಲ್ಪ ಸಮಯ ಅಲ್ಲೇ ಕುಳಿತು ದಣಿವಾರಿಸಿಕೊಂಡು ಕೆಲವೊಂದು ಫೋಟೋಗಳನ್ನು ತೆಗೆದುಕೊಂಡು ನಿಧಾನವಾಗಿ ಇಳಿದು ಕೆಳಗೆ ಬರುವಷ್ಟರಲ್ಲಿ ಸೂರ್ಯ ಪಶ್ಚಿಮದಲ್ಲಿ ಮುಳುಗಲು ತಯಾರಾಗಿದ್ದ. ಎಲ್ಲರೂ ಮನೆ ತಲುಪುವ ವೇಳೆಗೆ ರಾತ್ರಿಯಾಗಿತ್ತು ಹಣ ಆಯಾಸವನ್ನು ಹೊತ್ತು ಹಿಂದಿರುಗಿದ್ದರು. ಬೆಟ್ಟ ಹತ್ತಿ ಇಳಿದ ಆನಂದ ಎಲ್ಲರ ಮನದಲ್ಲೂ ಶಾಶ್ವತವಾಗಿ ನಡೆಸಿತ್ತು.
ಮನು ಗಂಗಾಧರೇಶ್ವರನ ಬಳಿ ನಿಮ್ಮ ಆರೋಗ್ಯಕ್ಕಾಗಿ ಬೇಡಿಕೊಂಡೆ ಮುಂದಿನ ವಾರ ಊರಿಗೆ ಬರುವಾಗ ದೇವರ ಪ್ರಸಾದವನ್ನು ತರುತ್ತೇನೆ. ಅಜ್ಜಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಇನ್ನೇನು ವಿಷಯವಿಲ್ಲ.
ಧನ್ಯವಾದಗಳು, ಇಂತಿ ನಿಮ್ಮ ಮೊಮ್ಮಗ,
ಪ್ರಥಮ್
ಇವರಿಗೆ,
ಶ್ರಿನಿವಾಸ,
೩ನೇ ಮುಖ್ಯರಸ್ತೆ,
ಶಿವ ದೇವಸ್ಥಾನದ ಹತ್ತಿರ,
ಶಿವಮೊಗ್ಗ.