ಏಕೆ ಏಕೆ ಏಕೆ? ಮಕ್ಕಳ ವಿಜ್ಞಾನ ಕವನ | Jnana Kirana

Why, Why, Why? | A Children’s Science and Nature Poem

ಮಕ್ಕಳ ಕವನಗಳು - ಶಿಶು ಗೀತೆಗಳು ಆಗಸ್ಟ್ 29, 2026 2 ನಿಮಿಷ ಓದು
ಏಕೆ ಏಕೆ ಏಕೆ? ಮಕ್ಕಳ ವಿಜ್ಞಾನ ಕವನ | Jnana Kirana
ಸಾರಾಂಶ (Summary)

ಮಕ್ಕಳಲ್ಲಿ ಜಿಜ್ಞಾಸೆ ಮೂಡಿಸುವ 'ಏಕೆ ಏಕೆ ಏಕೆ?' ವಿಜ್ಞಾನ ಮತ್ತು ಪ್ರಕೃತಿ ಕುರಿತ ಕನ್ನಡ ಕವನ. ಮಕ್ಕಳ ಶಿಶು ಗೀತೆಗಳು ಹಾಗೂ ಕವನಗಳಿಗಾಗಿ ಜ್ಞಾನ ಕಿರಣಕ್ಕೆ ಭೇಟಿ ನೀಡಿ.

ಏಕೆ ಏಕೆ ಏಕೆ

ಪುಟ್ಟಿಯ ತಲೆಯಲ್ಲಿ ಪ್ರಶ್ನೆಗಳೇಕೆ?

ನಾಯಿ ಬಾಲವು ಡೊಂಕದು ಏಕೆ

ಆನೆಯ ಕಿವಿಗಳು ಅಗಲವದೇಕೆ

ಒಂಟೆಗೆ ಉದ್ದನೆ ಕತ್ತದು ಏಕೆ?

ಆಮೆಯ ಮೈಯಲ್ಲಿ ಚಿಪ್ಪದು ಏಕೆ?

ಮೀನು ನೀರಲ್ಲಿ ಇರುವುದು ಏಕೆ

ಇರುವೆ ಸಾಲಲ್ಲೇ ನಡೆಯುವುದು ಏಕೆ

ಕುದುರೆ ಬಾಲದಿ ಕೂದಲದೇಕ

ಹಾವಿಗೆ ಹಲ್ಲಲಿ ವಿಷವಿದೆ ಏಕೆ

ಕಡಲಿನ ನೀರು ಉಪ್ಪಿದೆ ಏಕೆ

ಹಾಲು ಉಕ್ಕುತ್ತಾ ಬರುತಿದೆ ಏಕೆ

ಔಷಧಿ ಬಲು ಕಹಿ ಕುಡಿಯುವುದೇಕೆ

ಕೆಸರಲಿ ಕಮಲ ಅರಳುವುದೇಕೆ

ಜಿಂಕೆಯ ಕೊಂಬು ಸೊಟ್ಟವದೇಕೆ

ಚಿರತೆಯ ಮೈಯಲ್ಲಿ ಪಟ್ಟೆಗಳೇಕೆ

ಕೋತಿಯ ವಾಸವು ಮರದಲ್ಲಿ ಏಕೆ

ಹಕ್ಕಿಯು ಬಾನಲ್ಲಿ ಹಾರುವುದೇಕೆ

ಚಂದ್ರನು ಇರುಳಲಿ ಬರುವನು ಏಕೆ

ಹಗಲಲ್ಲಿ ತಾರಗೆ ಕಾಣದು ಏಕೆ

ಮೋಡವು ಬಾನಲ್ಲಿ ತೇಲುವುದೇಕೆ

ಬೆಂಕಿಯ ಮುಟ್ಟಲು ಸುಡುವುದು ಏಕೆ

ಗುಲಾಬಿ ಗಿಡದಲಿ ಮುಳ್ಳದು ಏಕೆ

ನದಿಯು ವೇಗದಿ ಹರಿವುದು ಏಕೆ

ಬೆಟ್ಟವು ತೆಪ್ಪಗೆ ನಿಂತಿದೆ ಏಕೆ

ಕಾಲದ ಚಕ್ರವು ಉರುಳುವುದೇಕೆ

ಆಲಸಿಯಾಗಿ ಮನೆಯಲಿ ಉಳಿಯದೆ

ಶಾಲೆಗೆ ಪ್ರತಿದಿನ ನಡೆಯಮ್ಮ

ಓದಿ ಬರೆಯುತ ಜ್ಞಾನವ ಪಡೆದು

ಪ್ರಶ್ನೆಗೆ ಉತ್ತರ ತಿಳಿಯಮ್ಮ

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.