ಗಿರಗಿಟ್ಟಲೆ ಮಕ್ಕಳ ಕವನ | Girigittale | Jnana Kirana

The Spinning Top – A Children’s Poem About a Favourite Toy

ಮಕ್ಕಳ ಕವನಗಳು - ಶಿಶು ಗೀತೆಗಳು ಆಗಸ್ಟ್ 29, 2026 1 ನಿಮಿಷ ಓದು
ಗಿರಗಿಟ್ಟಲೆ ಮಕ್ಕಳ ಕವನ | Girigittale | Jnana Kirana
ಸಾರಾಂಶ (Summary)

ಮಕ್ಕಳಿಗಾಗಿ ಸುಂದರ ಕನ್ನಡ ಕವನ 'ಗಿರಗಿಟ್ಟಲೆ'. ಸಂತೆಯಲ್ಲಿ ತಂದ ಬಣ್ಣ ಬಣ್ಣದ ಗಿರಗಿಟ್ಟಲೆ ಆಟಿಕೆಯ ಆನಂದ ಹಾಗೂ ಸಂಭ್ರಮವನ್ನು ವರ್ಣಿಸುವ ಈ ಪದ್ಯವನ್ನು ಓದಿ.

ಗಿರಗಿಟ್ಟಲೆ

ಸಂತೆಗೆ ಹೋದೆ ಸೋಮವಾರ

ಕಂಡನು ಆಗಲೆ ಮಾರಾಟಗಾರ

ಕೊಂಡೆನು ಆಗಲೆ ಗಿರಗಿಟ್ಟಲೆ

ಗಿರಗಿರ ತಿರುಗೊ ಗಿರಗಿಟ್ಟಲೆ.

ಹಸಿರು ಕೆಂಪು ನೀಲಿ ಹಳದಿ

ಕಪ್ಪು ಬಿಳುಪು ಕಿತ್ತಳೆ ನೇರಳೆ

ತರತರ ಬಣ್ಣದ ಗಿರಗಿಟ್ಟಲೆ

ಗಿರಗಿರ ತಿರುಗೊ ಗಿರಗಿಟ್ಟಲೆ.

ಕಟಕಟ ಗುಟ್ಟುತ ಗಮನವ ಸೆಳೆವ

ಗಾಲಿಯ ಹಾಗೆ ಸುತ್ತ ತಿರುಗುವ

ಆನಂದವ ನೀಡುವ ಗಿರಗಿಟ್ಟಲೆ

ಗಿರಗಿರ ತಿರುಗೊ ಗಿರಗಿಟ್ಟಲೆ.

ದುಡ್ಡದು ಕಡಿಮೆ ಖುಷಿಯೂ ಹೆಚ್ಚು

ಮಕ್ಕಳಿಗಂತಿದು ಅಚ್ಚು ಮೆಚ್ಚು

ಬಳಿಯಲ್ಲಿದ್ದರೆ ನಾನೇ ರಾಜನೆ

ಗಿರಗಿರ ತಿರುಗೊ ಗಿರಗಿಟ್ಟಲೆ.

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.