ಬಳಪ ಅಕ್ಷರ ಕಲಿಕೆಯ ಗೆಳೆಯ | ಕನ್ನಡ ಮಕ್ಕಳ ಕವನ | Jnana Kirana

The Slate Pencil – A Children’s Poem About Learning Letters

ಮಕ್ಕಳ ಕವನಗಳು - ಶಿಶು ಗೀತೆಗಳು ಆಗಸ್ಟ್ 29, 2026 1 ನಿಮಿಷ ಓದು
ಬಳಪ ಅಕ್ಷರ ಕಲಿಕೆಯ ಗೆಳೆಯ | ಕನ್ನಡ ಮಕ್ಕಳ ಕವನ | Jnana Kirana
ಸಾರಾಂಶ (Summary)

ಮಕ್ಕಳಿಗಾಗಿ ಸುಂದರವಾದ ಕನ್ನಡ ಕವನ 'ಬಳಪ - ಅಕ್ಷರ ಕಲಿಕೆಯ ಗೆಳೆಯ'. ಅಕ್ಷರ ಅಭ್ಯಾಸ ಮತ್ತು ಸ್ಲೇಟಿನ ನೆನಪುಗಳನ್ನು ಕಾಪಾಡುವ ಮುದ್ದಾದ ಶಿಶು ಗೀತೆ ಇಲ್ಲಿದೆ ನೋಡಿ.

ಬೆಳ್ಳನೆ ಬಳಪ ಉದ್ದನೆ ಬಳಪ

ಬೆಣ್ಣೆಯಂದದಿ ನೀನಿರುವೆ|

ಕೈಯಲಿ ಹಿಡಿದು ಬರೆಯಲು ನಿನ್ನ

ಸುಂದರ ಅಕ್ಷರ ಮೂಡಿಸುವೆ||

ಶಾರದೆ ಎದುರಲಿ ಅಪ್ಪನ ತೊಡೆಯಲಿ

ಬೆರಗುಗಣ್ಣಲಿ ಕುಳಿತಿರುವೆ|

ಅಪ್ಪನ ಕೈಯನು ಹಿಡಿದು ಕೊಂಡು

ಓಂಕಾರವನು ತಿದ್ದಿರುವೆ||

ಅ ಆ ಇ ಈ ಎ ಬಿ ಸಿ ಡಿ

ಬರೆಯಲು ನಾನು ಕಲಿತಿರುವೆ|

ಆನೆ ಸೇಬು ಚೆಂಡು ಛತ್ರಿ

ಬಿಡಿಸುವ ರೀತಿ ತಿಳಿದಿರುವೆ||

ಬಳಪದಿ ಅಕ್ಷರ ಮೂಡಲು ಸ್ಲೇಟು

ನೋಡಲು ಅದೆಷ್ಟು ಸುಂದರವೆ|

ತಪ್ಪನು ತಿದ್ದಿ ಬರೆಯಲು ಮತ್ತೆ

ಉತ್ತಮ ಸಾಧನ ಅಲ್ಲವೆ??

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.