#ಇಂದು_ವಿಶ್ವ_ಗುಬ್ಬಿಗಳ_ದಿನ.
ಗುಬ್ಬಿಗಳ ಸಂಖ್ಯೆ ದಿನೇದಿನೇ ಕ್ಷೀಣಿಸಿತ್ತಿರುವುದು ವಿಷಾದನೀಯ...ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ..
#ಪ್ರಭಾವ
ಅಜ್ಜಿ ಮನೆಯ ಅಂಗಳದಿ ಹಕ್ಕಿ ಬಂದು ಕುಳಿತಿತು
ಅದನು ಕಂಡ ಮೊಮ್ಮಗುವು ಅಜ್ಜನನ್ನು ಕೇಳಿತು
ಕಾಳು ಹೆಕ್ಕಿ ತಿನ್ನುತಿರುವ ಹಕ್ಕಿ ಯಾವುದೆಂದಿತು?
ಎನಿತು ಚಂದ ಕೊರಳ ಕೊಂಕು ಹೆಸರದೇನದೆಂದಿತು?
ಅಯ್ಯೊ ಮಗುವೆ ಗುಬ್ಬಿಯದು ಚಿಕ್ಕ ಚಂದ ಹಕ್ಕಿಯು
ನಮ್ಮ ಕಾಲದಲ್ಲಿ ಇತ್ತು ಸಹಸ್ರಾರು ಸಂಖ್ಯೆಯು
ತಾತ ಗುಬ್ಬಿ ನಮ್ಮ ಮನೆಯ ಬಳಿಯು ಏಕೆ ಬಾರದು
ಒಂದು ದಿನವು ನಗರದಲ್ಲಿ ಗುಬ್ಬಿಯೆಲ್ಲೂ ಕಾಣದು?
ಮಗುವೆ ಕೇಳು ಮೊಬೈಲ್ ಫೋನು ತಂದಿಟ್ಟ ಕುತ್ತಿದು
ಪಕ್ಷಿ ಪ್ರಾಣಿ ಸಂಕುಲಕ್ಕೆ ಪ್ರಾಣಾಂತಿಕ ವಿಷವಿದು
ಗುಬ್ಬಿಗಳು ಹೆಚ್ಚು ಕಡಿಮೆ ನಶಿಸಿ ಹೋಗುತ್ತಿರುವುದು
ಅನ್ಯ ಪ್ರಾಣಿ ವರ್ಗಗಳಿಗೂ ಬಿಸಿ ಮುಟ್ಟದೆ ತಪ್ಪದು!
ಅಜ್ಜನಿತ್ತ ವಿವರ ಕೇಳಿ ಪುಟ್ಟ ತಲೆಯ ತೂಗಿದ
ಜಂಗಮವಾಣಿ ಬಳಕೆಯನ್ನು ಕಡಿಮೆಗೊಳಿಸತೊಡಗಿದ
ಈಗ ನೋಡು ಬಯಲಿನಲ್ಲಿ ಗುಬ್ನಿಗಳದೆ ಸಂಭ್ರಮ
ಕೂಡಿ ಬಾಳಿದಾಗ ಮಾತ್ರ ಭೂಮಿ ಸ್ವರ್ಗ ಸರಿಸಮ
ರಚನೆ -ಅರುಣ ರಾವ್