ಎಲ್ಲರಿಗೂ ನಮಸ್ಕಾರ.
ನನ್ನ ಹೆಸರು _____________. ನಾನು __________ ತರಗತಿಯಲ್ಲಿ ಓದುತ್ತಿದ್ದೇನೆ. ಇಂದು ನಾನು ಆದಿ ಶಂಕರಾಚಾರ್ಯರ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ಹೇಳುತ್ತೇನೆ.
ಶಂಕರಾಚಾರ್ಯರು ಕೇರಳಂ ರಾಜ್ಯದ ಕಾಲಟಿಯಲ್ಲಿ ಜನಿಸಿದರು. ಇವರು ಐದು ವರ್ಷದವರಿರುವಾಗ ತಮ್ಮ ತಂದೆಯನ್ನು ಕಳೆದುಕೊಂಡರು. ಅವರ ತಾಯಿ ಬಹಳ ಕಷ್ಟಪಟ್ಟು ಶಂಕರರನ್ನು ಸಾಕಿದರು. ಶಂಕರರು ತಮ್ಮ ಎಂಟನೇ ವಯಸ್ಸಿಗೆ ಸನ್ಯಾಸಿಯಾಗಬೇಕೆಂಬ ಆಸೆಯುಂಟಾಗುತ್ತದೆ. ಆದ್ದರಿಂದ ಅವರು ತಮ್ಮಬಳಿ ಹೇಳಿ, "ನನಗೆ ಸನ್ಯಾಸಿಯಾಗಲು ಅನುಮತಿ ನೀಡಿ" ಎಂದು ಹೇಳುತ್ತಾರೆ. ಅದಕ್ಕೆ ತಾಯಿ ಹೆದರಿ, "ಬೇಡವೇ ಬೇಡ" ಎಂದು ಖಡಾ ಖಂಡಿತವಾಗಿ ಹೇಳುತ್ತಾರೆ. ಇದರಿಂದ ಶಂಕರರಿಗೆ ಬಹಳ ಬೇಸರವಾಗುತ್ತದೆ. ಒಮ್ಮೆ ಶಂಕರರು ನದಿಯಲ್ಲಿ ಸ್ನಾನ ಮಾಡುವ ವೇಳೆಯಲ್ಲಿ ಒಂದು ಮೊಸಳೆ ಅವರ ಕಾಲನ್ನು ಗಟ್ಟಿಯಾಗಿ ಕಚ್ಚಿ ಹಿಡಿದುಕೊಳ್ಳುತ್ತದೆ. ಶಂಕರರು ಅಯ್ಯೋ, ಅಮ್ಮಾ................ ಎಂದು ಕಿರುಚಿದಾಗ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಅವರ ತಾಯಿ "ಬಿಡಿಸಿಕೊ ಕಂದ" ಎಂದು ಹೇಳಿದಾಗ ಶಂಕರರು, "ನೀವು ನನಗೆ ಸನ್ಯಾಸಿಯಾಗುವ ಅನುಮತಿಯನ್ನು ನೀಡಿದರೆ ಮಾತ್ರ ನಾನು ಮೊಸಳೆಯಿಂದ ಬಿಡಿಸಿಕೊಳ್ಳುತ್ತೇನೆ, ಇಲ್ಲದಿದ್ದರೆ ನಾನು ಬಿಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ. ಆಗ ಅವರು ತಮ್ಮ ಮಗನ ಪ್ರಾಣವನ್ನು ಉಳಿಸಿಕೊಳ್ಳಲು ಅನುಮತಿ ನೀಡುತ್ತಾರೆ. ಹೀಗೆ ಶಂಕರರು ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ, ತಾಯಿಯ ಕಾಲಿಗೆ ನಮಸ್ಕಾರ ಮಾಡಿ ಹೊರಟು ಹೋಗುತ್ತಾರೆ. ಹೀಗೆ ಎಂಟನೇ ವಯಸ್ಸಿನಲ್ಲಿ ಹೊರಟು ಹೀ
ಹೋದ ಬಾಲ ಶಂಕರರನ್ನು ಮತ್ತೆ ಅವರ ತಾಯಿ ತಾನು ಕೊನೆಯಸಿರೆಳೆಯುವಾಗ ಆದಿ ಶಂಕರಚಾರ್ಯನ್ನಾಗಿ ತನ್ನ ಕೊನೆಯ ಗಳಿಗೆಯಲ್ಲಿ ಕಾಣುತ್ತಾಳೆ. ಸಾಯುವ ಮನಸ್ಸಿನಲ್ಲಿ ಶಂಕರರು ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಅವರ ಅಂತ್ಯಕ್ರಿಯೆಯನ್ನು ತಮ್ಮ ಸ್ವಹಸ್ತದಿಂದ ನೆರವೇರಿಸುತ್ತಾರೆ.
ಧನ್ಯವಾದಗಳು.