ಕ್ಷೇಮ ಶ್ರೀ ಪ್ರಥಮ್,
ಮನೆ ನಂ: ೬೬/೮೧,
ವಿಜಯನಗರ,
ಬೆಂಗಳೂರು - ೪0
ದಿನಾಂಕ:- 01 ಜುಲೈ 2026
ತೀರ್ಥರೂಪ ಸಮಾನರಾದ ಅಣ್ಣನಿಗೆ,
ನಿನ್ನ ತಮ್ಮ ಮಾಡುವ ನವಸ್ಕಾರಗಳು. ನಾನು ಇಲ್ಲಿ ಕ್ಷೇಮವಾಗಿದ್ದೇನೆ. ನೀನು ಸಹ ಕ್ಷೇಮವಾಗಿ ಇರುವೆನೆಂದು ಭಾವಿಸುತ್ತೇನೆ. ನನ್ನ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತಿದೆ. ನಿನ್ನ ಓದಿನ ಬಗ್ಗೆ ನನಗೆ ಪತ್ರ ಬರೆಯುವುದನ್ನು ಮರೆಯಬೇಡ.
ಈಗ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯಲ್ಲಿ ಓದಿನ ಜೊತೆಜೊತೆಗೆ ಆಟ-ಪಾಠಗಳಿಗೂ ಮಹತ್ವವನ್ನು ನೀಡುತ್ತಾರೆ ಎಂದು ನಿನಗೆ ಮೊದಲೇ ತಿಳಿಸಿದ್ದೆನ ಅದರಡೆ ಈ ಬಾರಿ ನಮಗೆ ಜೆಸ್, ಕ್ರಿಕೆಟ್, ಕೊಕೋ ಹಾಗೂ ಥೋಬಾಲ್‌ಗಳನ್ನು ಆಡಿಸುತ್ತಿದ್ದಾರೆ. ಇವುಗಳಲ್ಲಿ ನನಗೆ ಕ್ರಿಕೆಟ್ ಆಟ ಬಹಳ ಇಷ್ಟ. ಆದ್ದರಿಂದ ಈ ಆಟಕ್ಕೆ ಆಟಗಾರರನ್ನು ಆಯ್ಕೆಮಾಡುವಾಗ ನಾನು ಅತ್ಯತ್ತಮ ಪ್ರದರ್ಶನವನ್ನು ನೀಡಿದೆ. ಇದರಿಂದಾಗಿ ನನ್ನನ್ನು ತಂಡದ ನಾಯಕನ್ನಾಗಿ ಮಾಡಿದ್ದಾರೆ. ನಾನು ಬಹಳ ಕ್ರಮವಹಿಸಿ ನನ್ನ ತಂಡವನ್ನು ಗೆಲುವಿನ ಹಾದಿಯಲ್ಲಿ ಕರೆದೊಯ್ಯುತ್ತೇನೆ ಎಂಬ ಭರವಸೆ ನನಗಿದ.-ಆಟದ ಭಾವಚಿತ್ರಗಳನ್ನು ಈ ಪತ್ರದ ಜೊತೆ ಕಳುಹಿಸಿದ್ದೇನೆ.
ಮುಂದಿನ ವಾರ ನಮ್ಮ ಈ ಆಟದ ಅಂತಿಮ ಸುತ್ತಿನ ಪಂದ್ಯಾವಳಿ ನಡೆಯಲಿದೆ. ಅದನ್ನು ವೀಕ್ಷಿಸಲು ನೀನು ತಪ್ಪದೆ ಬರಬೇಕು. ತಂದೆ-ತಾಯಿಗಳಿಗೆ ನನ್ನ ನಮಸ್ಕಾರಗಳನ್ನು ತಿಳಿಸು. ಇನ್ನೇನು ವಿಷಯವಿಲ್ಲ.
ಧನ್ಯವಾದಗಳು, ಇಂತಿ ನಿನ್ನ ಪ್ರೀತಿಯ ತಮ್ಮ
ಪ್ರಥಮ್
ಹೊರವಿಳಾಸ
ಅರವಿಂದ್,
ನಂ. ೪೬,
ರಥ ಬೀದಿ,
ದಾವಣಗೆರೆ