ನಮ್ಮ ಮಿಸ್ಸು - ಶಿಕ್ಷಕಿಯ ಕುರಿತು ಮಕ್ಕಳ ಕವನ | Jnana Kirana

Our Teacher – A Children’s Poem About a Caring Teacher

ಮಕ್ಕಳ ಕವನಗಳು - ಶಿಶು ಗೀತೆಗಳು ಆಗಸ್ಟ್ 29, 2026 1 ನಿಮಿಷ ಓದು
ನಮ್ಮ ಮಿಸ್ಸು - ಶಿಕ್ಷಕಿಯ ಕುರಿತು ಮಕ್ಕಳ ಕವನ | Jnana Kirana
ಸಾರಾಂಶ (Summary)

ಶಿಕ್ಷಕಿಯ ಪ್ರೀತಿ ಮತ್ತು ಬೋಧನೆಯನ್ನು ಬಣ್ಣಿಸುವ ಸುಂದರ ಕನ್ನಡ ಮಕ್ಕಳ ಕವನ 'ನಮ್ಮ ಮಿಸ್ಸು'. ಶಾಲಾ ಕವನ ವಾಚನ ಮತ್ತು ಶಿಕ್ಷಕರ ದಿನಾಚರಣೆಗೆ ಸೂಕ್ತವಾದ ಸರಳ ಕವಿತೆ ಇಲ್ಲಿದೆ.

ನಮ್ಮಿಸ್ಸು

ನಮ್ಮಿಸ್ಸು ಬರ್ತಾರೆ

ನಮ್ಮಿಸ್ಸು ನಗ್ತಾರೆ

ಮಕ್ಕಳ ಕಡೆಗೆ ಕೈಯನು ಬೀಸಿ

ಗುಡ್ ಮಾರ್ನಿಂಗ್ ಹೇಳ್ತಾರೆ

ನಮ್ಮಿಸ್ಸು ನಗ್ತಾರೆ

ನಮ್ಮಿಸ್ಸು ಕಲಿಸ್ತಾರೆ

ನಗುನಗುತ್ತಲೇ ಪಾಠವ ಹೇಳಿ

ಕಲಿಕೆಯ ಸುಲಭ ಮಾಡ್ತಾರೆ

ನಮ್ಮಿಸ್ಸು ಬರಿತ್ತಾರೆ

ನಮ್ಮಿಸ್ಸು ಓದ್ತಾರೆ

ಓದು ಬರಹ ಕಲಿಸುತ ನಮ್ಮನು

ಜಾಣ ಮರಿಯಾಗಿ ಮಾಡ್ತಾರೆ

ನಮ್ಮಿಸ್ಸು ಆಡ್ತಾರೆ

ನಮ್ಮಿಸ್ಸು ಹಾಡ್ತಾರೆ

ಹಾಡನ್ನು ಹೇಳುತ ಆಟವಾಡಿಸುತ

ಜೀವನ ಪಾಠ ಕಲಿಸ್ತಾರೆ

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.