ಮುದ್ದಿನ ಬೆಕ್ಕು ಬೆಕ್ಕಿನ ಕುರಿತು ಮಕ್ಕಳ ಕವನ | Jnana Kirana

My Cute Cat | A Children’s Poem About a Pet Cat

ಮಕ್ಕಳ ಕವನಗಳು - ಶಿಶು ಗೀತೆಗಳು ಆಗಸ್ಟ್ 29, 2026 1 ನಿಮಿಷ ಓದು
ಮುದ್ದಿನ ಬೆಕ್ಕು ಬೆಕ್ಕಿನ ಕುರಿತು ಮಕ್ಕಳ ಕವನ | Jnana Kirana
ಸಾರಾಂಶ (Summary)

ಬೆಕ್ಕಿನ ಕುರಿತು ಸುಂದರ ಮಕ್ಕಳ ಕನ್ನಡ ಕವನ 'ಮುದ್ದಿನ ಬೆಕ್ಕು'. ಮಕ್ಕಳ ವಾಚನ ಮತ್ತು ಶಾಲಾ ಸ್ಪರ್ಧೆಗಳಿಗೆ ಸೂಕ್ತವಾದ ಕವನ ಇಲ್ಲಿದೆ. ಓದಿ ಆನಂದಿಸಿ!

ಮುದ್ದಿನ ಬೆಕ್ಕು

ಬಾ ಬಾ ಬೆಕ್ಕೆ

ಕಪ್ಪನೆ ಬೆಕ್ಕೆ

ಹಾಲನು ಕೊಡುವೆ

ಬಾ ಬಾ

ಬಾಲವನೆತ್ತಿ

ಮೈಯ‌ನು ಒತ್ತಿ

ಮೀ ಮೀ ಗುಟ್ಟುತ

ಬಾ ಬಾ

ಕಣ್ಣಿನ ಹೊಳಪು

ಉಗುರಿನ ಚೂಪು

ಎನಿತು ಸೋಜಿಗ

ಬಾ ಬಾ

ಮನೆಯನು ಶೋಧಿಸಿ

ಇಲಿಗಳ ಓಡಿಸೊ

ಕೆಲಸವ ಮಾಡಲು

ಬಾ ಬಾ

ಹಾಲನು ಕುಡಿದು

ಅನ್ನವ ಮೆದ್ದು

ನನ್ನೊಡನಾಡಲು

ಬಾ ಬಾ

ಕಂಬಳಿ ಹೊದ್ದು

ನನ್ನ ಬಳಿಯಲಿ

ಬೆಚ್ಚಗೆ ಮಲಗಲು

ಬಾ ಬಾ

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.