ಕೂಡಿ ಬಾಳು ಮಕ್ಕಳ ನೈತಿಕ ಕವನ | Jnana Kirana

Live Together and Share | A Moral Children’s Poem

ಮಕ್ಕಳ ಕವನಗಳು - ಶಿಶು ಗೀತೆಗಳು ಆಗಸ್ಟ್ 29, 2026 2 ನಿಮಿಷ ಓದು
ಕೂಡಿ ಬಾಳು ಮಕ್ಕಳ ನೈತಿಕ ಕವನ | Jnana Kirana
ಸಾರಾಂಶ (Summary)

ಅರುಣಾ ರಾವ್ ಅವರ 'ಕೂಡಿ ಬಾಳು' ಮಕ್ಕಳ ನೈತಿಕ ಕವನ. ಹಂಚಿಕೊಂಡು ಬಾಳುವ ಪ್ರಾಮುಖ್ಯತೆಯನ್ನು ನಾಯಿಗಳ ಕಥೆಯ ಮೂಲಕ ತಿಳಿಸುವ ಸುಂದರ ಶಿಶು ಗೀತೆ ಇಲ್ಲಿದೆ.

#30ನೇ ಮಕ್ಕಳ ಕವನ

#ಕೂಡಿ_ಬಾಳು

ರೊಟ್ಟಿಯ ತುಣುಕನು ಬೀದಿಯಲಿ

ಯಾರದೊ ಮನೆಯ ಎದುರಿನಲಿ

ನಾಯಿಯು ಕಂಡಿತು ಆಸೆಯಲಿ

ಬಳಿ ಸಾರಿತು ಅತೀವ ನಲಿವಿನಲಿ

ಬಾಯನು ಹಾಕಿತು ಒಲವಿನಲಿ

ಕರಿ ನಾಯೊಂದು ಬಲು ರೋಷದಲಿ

ಬಳಿಗೆ ಧಾವಿಸಿತು ಕ್ಷಣದಲ್ಲಿ

ರೊಟ್ಟಿಯ ಎಳೆಯಿತು ವೇಗದಲಿ

ಜಗಳವು ಸಾಗಿತು ಭರದಲ್ಲಿ

ಬೊಗಳಿತು ಕಚ್ಚಿತು ಕೋಪದಲಿ

ಇಬ್ಬರೂ ಜಗಳವ ನೋಡುತ್ತಲಿ

ಮೂರನೆ ಶ್ವಾನ ನಿಶಬ್ದದಲಿ

ಕದ್ದಿತು ರೊಟ್ಟಿಯ ಗುಟ್ಟಲ್ಲಿ

ಓಡಿತು ಅದು ಶರವೇಗದಲಿ

ನಾಯಿಗಳೆರಡರ ಜಗಳದಲಿ

ರೊಟ್ಟಿಯು ಮಾಯವು ಕ್ಷಣದಲ್ಲಿ

ಇಬ್ಬರ ನಡುವಿನ ಜಗಳದಲಿ

ಮೂರನೆಯನೆಂದೂ ಲಾಭದಲಿ

ಹಂಚಿ ಬಾಳುವ ಬದುಕಿನಲಿ

ಸುಖವಿದೆ ಎಂದಿಗೂ ನೆನಪಿರಲಿ

#ಅರುಣಾ ರಾವ್

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.