ಕರಿಯ - ನನ್ನ ಆಪ್ತ ಗೆಳೆಯ ಮಕ್ಕಳ ಕವನ | Jnana Kirana

Kariya – My Dear Friend

ಮಕ್ಕಳ ಕವನಗಳು - ಶಿಶು ಗೀತೆಗಳು ಆಗಸ್ಟ್ 29, 2026 2 ನಿಮಿಷ ಓದು
ಕರಿಯ - ನನ್ನ ಆಪ್ತ ಗೆಳೆಯ ಮಕ್ಕಳ ಕವನ | Jnana Kirana
ಸಾರಾಂಶ (Summary)

ಕರಿಯ ಎಂಬ ನಾಯಿಯ ಸ್ವಾಮಿ ನಿಷ್ಠೆ ಹಾಗೂ ಪ್ರೀತಿಯನ್ನು ಸಾರುವ ಸುಂದರ ಕನ್ನಡ ಮಕ್ಕಳ ಕವನ. ಶಿಶು ಗೀತೆಗಳು ಮತ್ತು ಮಕ್ಕಳ ಸಾಹಿತ್ಯಕ್ಕಾಗಿ ಜ್ಞಾನ ಕಿರಣಕ್ಕೆ ಭೇಟಿ ನೀಡಿ.

ಕರಿಯ ನನ್ನ ಆಪ್ತ ಗೆಳೆಯ

ಕಣ್ಣು ಏನು ಚುರುಕದು

ಬೊಗಳಲೆಂದು ಬಾಯಿ ತೆರೆಯೆ

ಮಿಂಚು ನಾಚಿ ನಿಲುವುದು

ಕರಿಯ ಪಾಪ ಕಾಲು ಚಾಚಿ

ಮಲಗಿಹನು ಸುಮ್ಮನೆ

ಯಾವುದನ್ನು ಕುರಿತು ಅವನು

ಮಾಡುತಿಹನು ಯೋಚನೆ

ಮಾಂಸ ಮುದ್ದೆ ಮೂಳೆ ರೊಟ್ಟಿ

ಅವನಗಿಷ್ಟ ತಿನ್ನಲು

ಬಾಲ ಅತ್ತ ಇತ್ತ ತೂಗಿ

ಖುಷಿಯ ಪಡುವ ಹಾಕಲು

ಅಪರಿಚಿತರ ಕಂಡರಂತೂ

ಬೊಗಳೊ ಬಾಯಿ ಮುಚ್ಚನು

ಕಳ್ಳ ಸುಳ್ಳ ದರೋಡೆಕೋರ

ಪತ್ತೆ ಹಚ್ಚೆ ಬಿಡುವನು

ಸ್ವಾಮಿ ನಿಷ್ಠೆ ಪ್ರೀತಿಗಳಲಿ

ಅವನಿಗವನೆ ಸಾಟಿಯು?

ಪ್ರಾಮಾಣಿಕತೆಗೆ ಇವನ ಹೆಸರು

ಇಟ್ಟರೇನು ತಪ್ಪದು?

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.