ಗಾಂಧಿ ಇವನು ಕೋಲು ಹಿಡಿದು
ನಡೆಯತೊಡಗೆ ಸರಸರ ಸೂರ್ಯ ಮುಳುಗ ನೆನ್ನುವಂತಹ
ದೇಶ ಕೂಡ ಗಡಗಡ
ಎನ್ನುವ ಕವಿ ವಾಣಿಯಂತೆ ಮಹಾತ್ಮ ಗಾಂಧೀಜಿಯವರನ್ನು ಕಂಡು ಸೂರ್ಯನೆಂದೂ ಮುಳುಗದ ಬ್ರಿಟಿಷ್ ಸಾಮ್ರಾಜ್ಯ ಹೆದರಿ ನಮ್ಮ ದೇಶವನ್ನು ಬಿಟ್ಟು ಓಡಿಹೋಯಿತು.
ಎಲ್ಲರಿಗೂ ಆತ್ಮೀಯ ನಮಸ್ಕಾರ. ಇಲ್ಲಿ ನೆರೆದಿರುವ ಸಮಸ್ತರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ತ್ಯಾಗ ಮತ್ತು ಬಲಿದಾನಗಳನ್ನು ಮಾಡಿದ ಹಲವಾರು ಮಹನೀಯರಲ್ಲಿ ಗಾಂಧೀಜಿ ಪ್ರಮುಖರು. ಇವರ ಪೂರ್ಣ ಹೆಸರು ಮೋಹನ ದಾಸ ಕರಮಚಂದ ಗಾಂಧಿ. 1969ರ ಅಕ್ಟೋಬರ್ 2ರಂದು ಗುಜರಾತಿನ ಪೋರ ಬಂದರಿನಲ್ಲಿ ಜನಿಸಿದ ಇವರ ತಂದೆ ಕರಮಚಂದ ಗಾಂಧಿ, ತಾಯಿ ಪುತಲಿ ಬಾಯಿ. ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪೂರ್ಣಗೊಳಿಸಿ, ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಒಮ್ಮೆ ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಬಳಿ ಫಸ್ಟ್ ಕ್ಲಾಸ್ ಟಿಕೆಟ್ ಇದ್ದರೂ ಅವರನ್ನು ರೈಲಿನಿಂದ ಹೊರಗೆ ದಬ್ಬಲಾಯಿತು. ಆ ಮೈ ನಡುಗಿಸುವ ಚಳಿಯಲ್ಲಿ ರೈಲು ನಿಲ್ದಾಣದಲ್ಲಿ ಅನಾಥರಾಗಿ ನಿಂತ ಗಾಂಧೀಜಿಯವರು ನಮ್ಮನ್ನು ರೈಲಿನಲ್ಲಿ ಪ್ರಯಾಣ ಮಾಡಲು ಬಿಡಲಿಲ್ಲ, ಆದರೆ ನಮ್ಮ ದೇಶವನ್ನು ಸುಮಾರು 300 ವರ್ಷಗಳಿಂದ ಕಾಲ ಆಳುತ್ತಿರುವಿರಲ್ಲ! ನಿಮ್ಮನ್ನು ಭಾರತ ಬಿಟ್ಟು ಓಡಿಸಿಯೇ ತೀರುತ್ತೇನೆ ಎಂದು ಸಂಕಲ್ಪ ಮಾಡಿ ಭಾರತಕ್ಕೆ ಹಿಂದಿರುಗಿದರು.ಅದರಂತೆ ಈಗಾಗಲೇ ಪ್ರಾರಂಭಗೊಂಡಿದ್ದ ಸ್ವಾತಂತ್ರ್ಯ ಚಳುವಳಿಯ ಚುಕ್ಕಾಣಿಯನ್ನು ಹಿಡಿದು, "ಬ್ರಿಟಿಷರೇ ಭಾರತ ಬಿಟ್ಟು ತೊಲಗಿ", "ಉಪ್ಪಿನ ಸತ್ಯಾಗ್ರಹ", "ಸ್ವದೇಶಿ ಚಳುವಳಿ" ಮುಂತಾದ ಚಳುವಳಿಗಳ ಮುಂದಾಳತ್ವವನ್ನು ವಹಿಸಿದರು. ಇವರ ಪ್ರಮುಖ ಅಸ್ತ್ರಗಳೆಂದರೆ ಅಹಿಂಸೆ ಮತ್ತು ಸತ್ಯಾಗ್ರಹ. ಇವರೆಲ್ಲರ ಹೋರಾಟ ಮತ್ತು ತ್ಯಾಗದ ಫಲವಾಗಿ 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು.
ಆದ್ದರಿಂದ ನಾವೆಲ್ಲರೂ ಇವರನ್ನು ಪ್ರೀತಿಯಿಂದ ' 'ರಾಷ್ಟ್ರಪಿತ' ಎಂಬ ಬಿರುದನ್ನು ನೀಡಿ ಗೌರವಿಸುತ್ತೇವೆ. ಅವರ ಜನ್ಮದ ಅಂಗವಾಗಿ ಅಕ್ಟೋಬರ್ ಎರಡನೇ ತಾರೀಖಿನಂದು ಗಾಂಧಿ ಜಯಂತಿಯನ್ನು ದೇಶದಾದ್ಯಂತ ಆಚರಿಸುತ್ತೇವೆ. ಈ ಶುಭ ಸಂದರ್ಭದಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಅರ್ಪಿಸುತ್ತಾ ನನ್ನ ಈ ಮಾತುಗಳನ್ನು ಮುಗಿಸುತ್ತೇನೆ.
ಜೈ ಹಿಂದ್
ಜೈ ಕರ್ನಾಟಕ