ತಾಳ್ಮೆ ಮತ್ತು ಧೈರ್ಯ ಕನ್ನಡ ಪ್ರಬಂಧ | Jnana Kirana

Escaping a Great Danger Through Patience and Courage

ಪ್ರಬಂಧ ಮತ್ತು ಪತ್ರ ಲೇಖನ ಆಗಸ್ಟ್ 27, 2026 3 ನಿಮಿಷ ಓದು
ತಾಳ್ಮೆ ಮತ್ತು ಧೈರ್ಯ ಕನ್ನಡ ಪ್ರಬಂಧ | Jnana Kirana
ಸಾರಾಂಶ (Summary)

ಕವಲೇದುರ್ಗ ಚಾರಣದ ಸಾಹಸಮಯ ಘಟನೆ ಹಾಗೂ 'ತಾಳ್ಮೆ ಮತ್ತು ಧೈರ್ಯವೇ ರಕ್ಷಣೆ' ಎಂಬ ವಿಷಯದ ಕುರಿತಾದ ಸಂಪೂರ್ಣ ಕನ್ನಡ ಪ್ರಬಂಧ ಇಲ್ಲಿದೆ. ಶಾಲಾ ಪರೀಕ್ಷೆಗಳಿಗೆ ಉಪಯುಕ್ತ.

"ನನ್ನ ತಾಳ್ಮೆ ಮತ್ತು ಧೈರ್ಯವೇ ನನ್ನನ್ನು ದೊಡ್ಡ ಆಪತ್ತಿನಿಂದ ರಕ್ಷಿಸಿತು" ಎಂಬ ವಾಕ್ಯದೊಡನೆ ಮುಕ್ತಾಯವಾಗುವ ಒಂದು ಘಟನೆ ಅಥವಾ ಕಥೆ.

"ತಾಳಿದವನು ಬಾಳಿಯಾನು" ಎಂಬ ಗಾದೆಯ ಮಾತಿನಂತೆ ತಾಳ್ಮೆ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮುಂಗೋಪ ಮತ್ತು ದುಡುಕಿನ ನಿರ್ಧಾರಗಳು ಸದಾ ಕಾಲ ಅಪಾಯಕ್ಕೆ ದಾರಿಮಾಡಿಕೊಡುತ್ತವೆ.

ನನ್ನ ಜೀವನದಲ್ಲಿಯೂ ಸಹ ಇದೇ ರೀತಿ ದುಡುಕಿದ್ದರಿಂದ ಅನುಭವಿಸಿದ ನೋವು ಬಹಳ.

ಒಮ್ಮೆ ನನ್ನ ಗೆಳೆಯರೆಲ್ಲರೂ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿರುವ 'ಕವಲೇದುರ್ಗಕ್ಕೆ' ಚಾರಣಕ್ಕಾಗಿ (trekking) ಹೊರಟಿದ್ದರು. ನಾನು ಕೂಡ ನನ್ನ ತಂದೆ-ತಾಯಿಯರನ್ನು ಕಾಡಿ-ಬೇಡಿ ಒಪ್ಪಿಸಿದೆ. ಮಾರನೆಯ ದಿನ ಮುಂಜಾನೆ ಚುಮುಚುಮು ಚಳಿಯಲ್ಲಿ ಚಾರಣಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಉತ್ಸಾಹದಿಂದ ಹೊರಟೆನು. ಮಾರ್ಗಮಧ್ಯದಲ್ಲಿ ಸಿಕ್ಕ ಒಂದು ಹಳ್ಳಿಯಲ್ಲಿ ಟೀ ಕುಡಿದು ಬೆಟ್ಟದ ತಪ್ಪಲನ್ನು ತಲುಪಿದೆವು. ನಮ್ಮ ತಂಡದಲ್ಲಿ ಸುಮಾರು ನಲವತ್ತು (40) ಜನರಿದ್ದರು. ಚಾರಣದ ಮಾರ್ಗದರ್ಶಕರಾದ 'ಗೋಪಾಲ' ನಮ್ಮನ್ನೆಲ್ಲ ಒಂದೆಡೆ ಕಲೆ ಹಾಕಿ ಅಗತ್ಯ ಮಾಹಿತಿಗಳನ್ನು ಕೊಡುವುದರ ಜೊತೆಗೆ ಕೆಲವೊಂದು ಎಚ್ಚರಿಕೆಯನ್ನು ನೀಡಿದರು. ಆ ದಿನದ ಹಿಂದಷ್ಟೇ ಅಂದರೆ ಮೊನ್ನೆಯಷ್ಟೇ 'ಕಾಡಾನೆಯೊಂದು' ಚಾರಣಿಗರ ತಂಡದ ಮೇಲೆ ದಾಳಿ ನಡೆಸಿ ಒಬ್ಬನನ್ನು ಬಲಿ ತೆಗೆದುಕೊಂಡಿತ್ತು. ಆದ್ದರಿಂದ ಆನೆಯ ಸುಳಿವು ಕಂಡು ಬಂದಲ್ಲಿ ಜಾಗರೂಕರಾಗಿರಬೇಕೆಂದು, ನಿಶ್ಯಬ್ದವನ್ನು ಪಾಲಿಸಬೇಕೆಂದು ಒತ್ತಿ ಒತ್ತಿ ಹೇಳಿದಾಗ ನನ್ನ ಎದೆ ಢವಗುಟ್ಟತೊಡಗಿತು. "ಅಪ್ಪ ಅಮ್ಮನ ಮಾತು ಕೇಳಿ ಮನೆಯಲ್ಲೇ ಇದ್ದಿದ್ದರೆ ಚೆನ್ನಾಗಿತ್ತು" ಎಂದು ಅನಿಸದೆ ಇರಲಿಲ್ಲ.

ಚಾರಣವನ್ನು ಪ್ರಾರಂಭಿಸಿದ ಮೇಲೆ ನಮ್ಮ ಭಯ ದೂರವಾಗಿ ಆ ಪ್ರಕೃತಿ ಸೌಂದರ್ಯವನ್ನು ಸವಿಯುವುದರಲ್ಲಿ ನಿರತರಾದೆವು. ಅಲ್ಲಲ್ಲಿ ಕುಳಿತು, ಹರಟುತ್ತ, ಹಾಡುತ್ತ ಹಿಂದೆ ಬಿದ್ದವರಿಗೆ ಕೈ ನೀಡಿ ಸಹಾಯ ಮಾಡುತ್ತ ಬೆಟ್ಟವನ್ನು ಏರತೊಡಗಿದೆವು. ಆದರೆ ಮುಂದೊಂದು ಕಡೆ ಅದೆಲ್ಲಿತ್ತೋ ಅದೆಲ್ಲಕ್ಕೂ ಅತಿಶಯವಾಗಿ ಗಂಭೀರತೆಯಿಂದ 'ಥೋ' ಎಂದು ಪ್ರತ್ಯಕ್ಷವಾಗಿತ್ತು. ಅದರ ಉದ್ದವಾದ ದಂತಗಳನ್ನು ನೋಡಿ ಹೆದರಿಕೆಯಿಂದ ಗಂಟಲು ಒಣಗಿ ಮೈ ಪೂರಾ ಬೆವರಿನ ಮುದ್ದೆಯಾಗಿತ್ತು ನಮ್ಮಲ್ಲಿ ಯಾರಾದರೂ ಸದ್ದು ಮಾಡಿದ್ದರೆ ಜೀವ ಸಹಿತ ಕುಡಿಯುವ ಉಳಿಯಲು ಸಾಧ್ಯವಿರಲಿಲ್ಲ ಅಂತೂ ಬದುಕಿದೆಯಾ ಬಡಜೀವವೇ ಎಂದುಕೊಂಡು ಮನೆ ಸೇರಿದೆವು ನನ್ನ ತಾಳ್ಮೆ ಮತ್ತು ಧೈರ್ಯವೇ ನನ್ನನ್ನು ದೊಡ್ಡ ಆಪತ್ತಿಯಿಂದ ರಕ್ಷಿಸಿತು.

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.