ನಾಡ ಹಬ್ಬ
ನಾಡ ಹಬ್ಬವು
ಬೊಂಬೆಯ ಹಬ್ಬವು
ಮಕ್ಕಳಿಗಂತೂ ಬಲು ಪ್ರಿಯವು|
ಹತ್ತು ದಿವಸಗಳು
ಮುಗಿಯದ ಸಂಭ್ರಮ
ಸೆಳೆವುದು ಎಲ್ಲರ ಕಣ್ಮನವು|
ಪಟ್ಟದ ಬೊಂಬೆ
ಸೆಟ್ಟಿ ದಂಪತಿಯು
ಮೊದಲಲಿ ಪ್ರತಿ ಸಂವತ್ಸರವು|
ಮದುವೆ ಸೆಟ್ಟು
ದಶಾವತಾರ
ಕೃಷ್ಣ ಲೀಲೆಯ ಅಬ್ಬರವು|
ಚಕ್ಕುಲಿ ಮುರುಕು
ಬೇಸನ್ ಲಾಡು
ಮಕ್ಕಳ ಪಾಲಿಗೆ ಅನುದಿನವು|
ಬೊಂಬೆಯ ತಿಂಡಿಯ
ಸ್ನೇಹಿತರೊಡನೆ
ಹಂಚಿ ತಿನ್ನಲು ರುಚಿಕರವು|
ಸಾಲಲಿ ಕುಳಿತು
ಗೀತೆಯ ಪಾಡೆ
ಹಬ್ಬದ ಕಳೆ ಇಮ್ಮಡಿಸುವುದು|
ಜಂಬೂ ಸವಾರಿಯು
ನಾಡಿನ ಕೀರ್ತಿಯ
ವಿಶ್ವದೆಲ್ಲೆಡೆ ಪಸರಿಪುದು|
✍️ಅರುಣಾ ರಾವ್