ಕಳ್ಳನೊಬ್ಬ ನಿಮ್ಮ ಕೈಚೀಲವನ್ನು ಕಿತ್ತು ಕೊಂಡು ಓಡಿ ಹೋಗಿದ್ದಾನೆ. ಆ ಚೀಲದಲ್ಲಿ ಹಣವಲ್ಲದೆ ಕೆಲವು ಮುಖ್ಯ ದಾಖಲೆ ಪತ್ರಗಳು ಇದ್ದವು. ಎಲ್ಲಾ ವಿವರಗಳನ್ನು . ನೀಡುತ್ತಾ ಸಮಿಹದ ಪೋಲೀಸ್ ಠಾಣೆಗೆ ದೂರು ನೀಡಿ ಪತ್ರ ಬರೆಯಿರಿ:-
ಇವರಿಂದ,
ಶಶಾಂಕ್
ನಂ.೨೪, ೩ನೇ
ಮುಖ್ಯರಸ್ತೆ, ವಿಜಯನಗರ, ಬೆಂಗಳೂರು - ೪೦.
ದಿನಾಂಕ: ೦೨ ಜುಲೈ, ೨೦೨೯
ಇವರಿಗೆ,
ಪೋಲಿಸ್ ಇನ್ಸ್ ಪೆಕ್ಟರ್,
ವಿಜಯನಗರ ಪೋಲೀಸ್ ಠಾಣೆ, ವಿಜಯನಗರ, ಬೆಂಗಳೂರು - ೪೦
ಮಾನ್ಯರೇ,
ವಿಷಯ: ಕೈಚೀಲ ಕಳುವಾಗಿರುವ ಬಗ್ಗೆ.
ನಾನು ವಿಜಯನಗರದ ನಿವಾಸಿ . ನಿನ್ನೆ ಅಂದರೆ ದಿನಾಂಕ: ೧/೭/೨೬ ರಂದು ನಾನು ಶಾಲೆ ಮುಗಿಸಿಕೊಂಡು ಮನೆಗೆ ತೆರೆಳುತ್ತಿದ್ದೆ. ನನ್ನ ಪ್ರಸ್ತಕಗಳ ಚೀಲದ ಜೊತೆಗೆ ಒಂದು ಕೈ ಚೀಲವೂ ಜೊತೆಯಲ್ಲಿತ್ತು. ವಿಜಯನಗರದ ಮಾರುಕಟ್ಟೆಯ ಬೀದಿಯಲ್ಲಿ ಹೋಗುತ್ತಿದ್ದಾಗ, ಕಳ್ಳನೊಬ್ಬ ನನ್ನ ಕೈಚೀಲವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಅದರಲ್ಲಿ ನನ್ನ ಅಂಕ ಪಟ್ಟಿಯ ಜೊತೆಗೆ ೫೦೦ ರೂಪಾಯಿಗಳು ಮತ್ತು ಮನೆಯ ಬೀಗದ ಕೈಯಿತ್ತು. ಈ ಕೈಚೀಲ ನನಗೆ ಬಹಳ ಮುಖ್ಯ. ಆದ್ದರಿಂದ ಆದಷ್ಟು ಶೀಘ್ರವಾಗಿ ನನ್ನ ಕೈಚೀಲವನ್ನು ಹುಡುಕಿ
ಕೊಡಬೇಕೆಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ.
ಧನ್ಯವಾದಗಳು
ಇಂತಿ ನಿಮ್ಮ ವಿಶ್ವಾಸಿ
ಶಶಾಂಕ್
ಹೊರವಿಳಾಸ,
ಪೋಲಿಸ್ ಇನ್ಸ್ ಪೆಕ್ಟರ್,
ವಿಜಯನಗರ ಪೋಲೀಸ್ ಠಾಣೆ,
ಬೆಂಗಳೂರು