ದೀಪಾವಳಿ

A rhythmic children’s poem about Diwali, featuring fireworks, temple bells, popping mustard seeds, anklets, and the joyful sounds of celebration.

ಮಕ್ಕಳ ಕವನಗಳು - ಶಿಶು ಗೀತೆಗಳು ಆಗಸ್ಟ್ 31, 2026 1 ನಿಮಿಷ ಓದು
ದೀಪಾವಳಿ
ಸಾರಾಂಶ (Summary)

ದೀಪಾವಳಿ, ದೀಪಾವಳಿ ಕವನ, ಮಕ್ಕಳ ಕವನಗಳು, ಹಬ್ಬದ ಕವನ, ಪಟಾಕಿ, ದೇಗುಲದ ಗಂಟೆ, ಗೆಜ್ಜೆ, ನಾದ, ಕನ್ನಡ ಮಕ್ಕಳ ಕವನ

ದೀಪಾವಳಿ

ದೀಪಾವಳಿಯ ಪಟಾಕಿಯೇನೋ

“ಡಬ್ ಡಬ್ ಡಬ್” ಎಂದು ಸಿಡಿಯುತ್ತೆ

ದೇಗುಲದಲ್ಲಿ ತೂಗುವ ಗಂಟೆ

“ಢಣ್ ಢಣ್ ಢಣ್” ಎಂದು ಹೊಡೆಯುತ್ತೆ

ಕಾದ ಎಣ್ಣೆಯಲ್ಲಿ ಹಾಕಿದ ಸಾಸಿವೆ

“ಚಿಟಪಟ ಚಿಟಪಟ” ಸಿಡಿಯುತ್ತೆ

ತಂಗಿಯ ಕಾಲಲ್ಲಿ ಇರುವ ಗೆಜ್ಜೆ

“ಗಲಗಲ ಗಲಗಲ” ಅನ್ನುತ್ತೆ.

ನಿಸರ್ಗದಲ್ಲಿ ಎಲ್ಲದರಲ್ಲೂ

ತಾಳಮೇಳಗಳು ಇರುತ್ತವೆ

ಮನಸ್ಸಿಗೆ ಮೋದ, ಮುದವನು ನೀಡಿ

ಬದುಕಿನಲ್ಲಿ ನಾದ ತುಂಬುತ್ತವೆ

ಮನೆಯಂಗಳದಿ ಹೊಳೆಯುವ ದೀಪ

ಮಿನುಗು ಮಿನುಗು ಹೊಳೆಯುತ್ತೆ

ಹೂವಿನ ಪರಿಮಳ, ನಗುವಿನ ನಾದ

ಮನಕೆ ಸಂತಸ ತುಂಬುತ್ತೆ

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.